ಕನಕದಾಸರ ಜನ್ಮಸ್ಥಳ - ಬಾಡ, ಹಾವೇರಿ ಜಿಲ್ಲೆ ಕನಕದಾಸರ ತಂದೆ ತಾಯಿಯ ಹೆಸರು - ತಂದೆ-ಬೀರಪ್ಪ, ತಾಯಿ- ಬಚ್ಚಮ್ಮ ಕನಕದಾಸರ ಜೀವಿತ ಕಾಲ ವರ್ಷ - 1495 -1502 ಕನಕದಾಸರ ಅಂಕಿತನಾಮ - ಆದಿಕೇಶವ ಕನಕದಾಸರ ಲಭ್ಯ ಕೀರ್ತನೆಗಳು -316 ಕನಕದಾಸರ ಗುರುವಿನ ಹೆಸರು - ಪ್ರಾರಂಭದಲ್ಲಿ ಶ್ರೀ ವೈಷ್ಣವ ಗುರು ತಾತಾಚಾರ್ಯ, ತರುವಾಯ ವ್ಯಾಸರಾಜರು ಕನಕದಾಸರಿಗೆ ಆಶ್ರಯ ನೀಡಿದ ರಾಜ - ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯರು ಕನಕದಾಸರ ಪೂರ್ವಾಶ್ರಮದ ಹೆಸರು - ಕನಕ, ಕನಕಪ್ಪ (ತಿಮ್ಮಪ್ಪ ನಾಯಕ ಎಂದು ಹೇಳಲಾಗುತ್ತದೆ, ಆದರೆ ಅವರ ಕೀರ್ಥನೆಗಳಲ್ಲಿ ಕನಕ, ಕನಕಪ್ಪ ಹೆಸರುಗಳೇ ಬಳಕೆಯಲ್ಲಿವೆ) ಕನಕದಾಸರ ಮಕ್ಕಳು - ಒಂದು ಗಂಡು ಮಗು ಆಗಿ ಅದು ಅನತಿಕಾಲದಲ್ಲಿಯೇ ತೀರಿಕೊಂಡಿತು ಎಂಬ ಪ್ರತೀತಿ ಇದೆ. ಕನಕದಾಸರ ಕೀರ್ತನೆಗಳಲ್ಲದೆ ಇತರ ಕೃತಿಗಳು- 1) ಮೋಹನ ತರಂಗಿಣಿ (ಸಾಂಗತ್ಯ ಕೃತಿ) 2) ರಾಮಧಾನ್ಯ ಚರಿತ್ರೆ (ಷಟ್ಪದಿ ಕಾವ್ಯ) 3) ಹರಿಭಕ್ತಸಾರ (ಷಟ್ಪದಿ ಕಾವ್ಯ) 4) ನೃಸಿಂಹಸ್ತವ (ಅನುಪಲ್ಲಭ) ಕನಕದಾಸರ ಪತ್ನಿಯ ಹೆಸರು - ಲಕ್ಷ್ಮೀದೇವಿ ಕನಕದಾಸರ ಮೊದಲ ವೃತ್ತಿ - ದಂಡನಾಯಕ ಸಾಮಂತರಾಜ. ಯುದ್ಧಒಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ. ಕನಕದಾಸರ ಮೋಹನ ತರಂಗಿಣಿ ಕುರಿತು ಮಾಹಿತಿ - ಮೋಹನ ತರಂಗಿಣಿಯು 42 ಸಂಧಿಗಳಿಂದ ...