ಕನಕದಾಸರ ತಂದೆ ತಾಯಿಯ ಹೆಸರು - ತಂದೆ-ಬೀರಪ್ಪ, ತಾಯಿ- ಬಚ್ಚಮ್ಮ
ಕನಕದಾಸರ ಜೀವಿತ ಕಾಲ ವರ್ಷ- 1495 -1502
ಕನಕದಾಸರ ಅಂಕಿತನಾಮ- ಆದಿಕೇಶವ
ಕನಕದಾಸರ ಲಭ್ಯ ಕೀರ್ತನೆಗಳು -316
ಕನಕದಾಸರ ಗುರುವಿನ ಹೆಸರು- ಪ್ರಾರಂಭದಲ್ಲಿ ಶ್ರೀ ವೈಷ್ಣವ ಗುರು ತಾತಾಚಾರ್ಯ, ತರುವಾಯ ವ್ಯಾಸರಾಜರು
ಕನಕದಾಸರಿಗೆ ಆಶ್ರಯ ನೀಡಿದ ರಾಜ- ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯರು
ಕನಕದಾಸರ ಪೂರ್ವಾಶ್ರಮದ ಹೆಸರು- ಕನಕ, ಕನಕಪ್ಪ (ತಿಮ್ಮಪ್ಪ ನಾಯಕ ಎಂದು ಹೇಳಲಾಗುತ್ತದೆ, ಆದರೆ ಅವರ ಕೀರ್ಥನೆಗಳಲ್ಲಿ ಕನಕ, ಕನಕಪ್ಪ ಹೆಸರುಗಳೇ ಬಳಕೆಯಲ್ಲಿವೆ)
ಕನಕದಾಸರ ಮಕ್ಕಳು- ಒಂದು ಗಂಡು ಮಗು ಆಗಿ ಅದು ಅನತಿಕಾಲದಲ್ಲಿಯೇ ತೀರಿಕೊಂಡಿತು ಎಂಬ ಪ್ರತೀತಿ ಇದೆ.
ಕನಕದಾಸರ ಕೀರ್ತನೆಗಳಲ್ಲದೆ ಇತರ ಕೃತಿಗಳು-
1) ಮೋಹನ ತರಂಗಿಣಿ (ಸಾಂಗತ್ಯ ಕೃತಿ)
2) ರಾಮಧಾನ್ಯ ಚರಿತ್ರೆ (ಷಟ್ಪದಿ ಕಾವ್ಯ)
3) ಹರಿಭಕ್ತಸಾರ (ಷಟ್ಪದಿ ಕಾವ್ಯ)
4) ನೃಸಿಂಹಸ್ತವ (ಅನುಪಲ್ಲಭ)
ಕನಕದಾಸರ ಪತ್ನಿಯ ಹೆಸರು- ಲಕ್ಷ್ಮೀದೇವಿ
ಕನಕದಾಸರ ಮೊದಲ ವೃತ್ತಿ- ದಂಡನಾಯಕ ಸಾಮಂತರಾಜ. ಯುದ್ಧಒಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ.
ಕನಕದಾಸರ ಮೋಹನ ತರಂಗಿಣಿ ಕುರಿತು ಮಾಹಿತಿ- ಮೋಹನ ತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣ ಚರಿತ್ರೆಯನ್ನು ಹೇಳುತ್ತಾ ತಮ್ಮ ರಾಜ ಶ್ರೀ ಕೃಷ್ಣದೇವರಾಯರನ್ನೇ ಶ್ರೀ ಕೃಷ್ಣನಿಗೆ ಹೋಲಿಸುತ್ತಾರೆ.
ಕನಕದಾಸರು ಕಾಲವಾದ ಸ್ಥಳ- ಕಾಗಿನೆಲೆ, ಬ್ಯಾಡಗಿ ತಾಲೂಕ, ಹಾವೇರಿ ಜಿಲ್ಲೆ .
"ಕುಲಕುಲವೆನ್ನುತಿಹರು
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ
ಕುಲಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ " - ಕನಕದಾಸರು

Comments
Post a Comment